Swamy Vivekananda Vidya Samsthe (R), Shikaripura

Shikaripura

Swamy Vivekananda Vidya Samsthe (R) > News and Events > ವಿಜ್ಞನ ಹಾಗೂ ಗಣಿತ ಶಿಕ್ಷಕರ 3 ದಿನಗಳ ಕಾರ್ಯಾಗಾರ ಕಾರ್ಯಕ್ರಮ

ವಿಜ್ಞನ ಹಾಗೂ ಗಣಿತ ಶಿಕ್ಷಕರ 3 ದಿನಗಳ ಕಾರ್ಯಾಗಾರ ಕಾರ್ಯಕ್ರಮ

DSC_6704 DSC_6712

ಸಂಸ್ಕಾರ, ಮೌಲ್ವಾಧಾರಿತ ಶಿಕ್ಷಣದಿಂದ ಉತ್ತಮ ರಾಷ್ರ ನಿರ್ಮಾಣ ಮಾಡಲು ಸಾದ್ಯ ಎಂದು ಶಾಸಕ ಬಿ. ವೈ. ರಾಘವೇಂದ್ರ ಹೇಳಿದರು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಇವರ ಸಹಯೋಗದೊಂದಿಗೆ ನಡೆದ ವಿಜ್ಞನ ಹಾಗೂ ಗಣಿತ ಶಿಕ್ಷಕರ 3 ದಿನಗಳ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದಿನ ಶಿಕ್ಷಣ ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗಿದ್ದು, ವಿಷಯಾದಾರಿತ ಬೋದನೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಮೇಲೆ ಸಮಾಜಕ್ಕೆ ದೇಶಕ್ಕೆ ಉತ್ತಮ ಯುವ ಪೀಳಿಗೆಯನ್ನು ಕೊಡುವ ನಟ್ಟಿನಲ್ಲಿ ಶಿಕ್ಷಣವನ್ನು ನೀಡಬೇಕು. ಯುವ ಪೀಳಿಗೆ ಹಿಂದುತ್ವ ನಿಷ್ಠ ಹಾಗೂ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡು, ಶಾರೀರಿಕ, ಪ್ರಾಣಿಕ, ಮಾನಸಿಕ, ಭೌದ್ಧಿಕ ಮತ್ತು ಆಧ್ಯಾತ್ಮಿಕವಾಗಿ ಪೂರ್ಣ ವಿಕಸಿತರಾಗುವ ಮೂಲಕ, ವರ್ತಮಾನ ಜೀವನದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಂತಾಗಬೇಕು. ಈ ಯುವ ಸಾಮಾಜಿಕ ಅನೀತಿ, ಶೋಷಣೆ ಮತ್ತು ಅನ್ಯಾಯಗಳಿಂದ ಮುಕ್ತ ಮಾಡುವ ಮೂಲಕ ರಾಷ್ಟ್ರ ಜೀವನವನ್ನು ಸಮರಸ, ಸುಸಂಪನ್ನ ಮತ್ತು ಸುಸಂಸ್ಕೃತ ಗೊಳಿಸಲು ತಮ್ಮನ್ನು ಸಮರ್ಪಿಸಿಕೊಳ್ಳಬೇಕು. ಈ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ನಮ್ಮ ರಾಷ್ಟ್ರೀಯ ಶಿಕ್ಷಣ ಪ್ರಣಾಳಿಕೆಯು ವಿಕಾಸವಾಗಬೇಕು. ಇದು ಶಿಕ್ಷಕರಿಂದ ಸಾದ್ಯ ಜೊತೆಗೆ ಪರಸ್ಪರ ಗೌರವ ನೀಡುವ ವಾತಾವರಣ ಇರಬೇಕು, ವಿದ್ಯಾರ್ಥಿಗಳು ಸುಪ್ತ ಪ್ರತಿಭೆ ಅರಳುವಂತೆ- ಪ್ರಕಟವಾಗುವಂತೆ ಕಾರ್ಯಕ್ರಮಗಳ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಹೆಚ್ ಎನ್ ಶ್ಯಾಮರಾವ್ ಮತನಾಡಿ ಬವಿಷ್ಯದ ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಕರಿಗೆ ಪ್ರತಿ ಹಂತದಲ್ಲಿ ತರಬೇತಿ ಅತಿ ಅವಶ್ಯಕ, ಶಿಕ್ಷಕನಾದವನು ನಿರಂತರ ಕಲಿಕೆಯಲ್ಲಿ ತೊಡಗಬೇಕು, ಪ್ರತಿಯೊಂದು ಪಠ್ಯಕ್ರಮ ಬೋಧನೆ ಉತ್ತಮ ಯೋಜನೆಯಿಂದ ಕೂಡಿರಬೇಕು ಜೊತೆಗೆ ಫಲಿತಾಂಶ ಹೊಂದಬೇಕು. ಯೊಚನಾಶಕಿ ಬೇಳಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯಾಭಾರತಿ ಅಧ್ಯಕ್ಷ ಎಂ ಜೆ ಸುಂದರ್‌ರಾಮ್ ಸಹ ಕಾರ್ಯದರ್ಶಿ ನರಸಪ್ಪ, ರಾಜ್ಯ ಪ್ರಮುಖ್ ರಾಜಾರಾಮ್, ಸ್ವಾಮಿ ವಿಒವೇಕಾನಂದ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಮನ್ವಯಾಧಿಕಾರಿ ಪ್ರೋ ಎಸ್ ಎಸ್ ಗದಗ್ ಉಪಸ್ಥಿತರಿದ್ದರು.

ಕಾರ್ಯಾಗಾರ 3 ದಿನ ನಡೆಯಲಿದ್ದು, ಬೌತಶಸ್ತ್ರ, ಅಂಕಗಣಿತ, ಜೀವಶಾಸ್ತ್ರ, ರೇಖಾಗಣಿತ, ರಸಾಯನಾ ಶಾಸ್ತ್ರ, ಬೀಜಗಣಿತ, ವಿಷಯಗಳಿಗೆ ಸಂಬಂದಿಸಿದಂತೆ ವಿವಿದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತದೆ. ಕಾರ್ಯಕ್ರಮವನ್ನು ವಿಶ್ವನಾಥ ಸ್ವಾಗತಿಸಿ ಮಂಜುನಾಥ ವಂದಿಸಿ, ಕುಮಾರಿ ಮೇಘನಾ ಮತ್ತು ಶ್ರೀಮತಿ ಲಲಿತಾ ನಿರೂಪಿಸಿದರು.

Latest Posts

Ganesh Chaturthi – 2023

Swamy Vivekananda Vidya Samsthe (R), Shikaripura. Wishing you all a Very Happy Ganesh Chaturthi, Wishing a beautiful, colorful and cheerful...

Contact Address

Swamy Vivekananda Vidya Samsthe (R)
Vivekanagara, Shikaripura
Shivamogga District, Karnataka.

Phone: 08187-222383
Fax: 08187-227130
Email: svvstrust96@gmail.com