Mythri College of Education,  Shivamogga

Mythri College of Education

Shivamogga
  Shivamogga
  mythrieducationgroup@gmail.com
Mythri College of Education > News and Events > ವಿಶ್ವ ಯೋಗ ದಿನಾಚರಣೆ – 2017

ವಿಶ್ವ ಯೋಗ ದಿನಾಚರಣೆ – 2017

Yoga day1 Yoga day

“YOGA is the journey of the self, through the self, to the self”

ಎಂದು ದಿ: 21.06.2017 ರ ಬುಧವಾರದಂದು ಬೆಳಗ್ಗೆ 9.00 ಗಂಟೆಗೆ ಸರಿಯಾಗಿ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಯೋಗ ದಿನಾಚರಣೆ” ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯೆ  ಡಾ. ಶಾಲಿನಿ. ಜೆ ರವರು ಉದ್ಘಾಟಿಸಿ ಮಾತನಾಡಿದರು.

ಇವರು ಮುಂದುವರೆಯುತ್ತಾ, ಜೂನ್ ತಿಂಗಳು ಹವಾಮಾನ ಬದಲಾಗುವ ಕಾಲವಾಗಿದ್ದು ಈ ಸಮಯದ ವಾತಾವರಣ ಮಾನವನ ದೇಹದಲ್ಲಿ ಜಡತ್ವವನ್ನು ಮೂಡಿಸುವ ಸಾಧ್ಯತೆ ಹೆಚ್ಚು. ಆದುದರಿಂದ ಯೋಗಾಭ್ಯಾಸ ಮಾನವನ ಈ ಜಡತ್ವವನ್ನು ಹೋಗಲಾಡಿಸುವ ಸೂಕ್ತ ಮಾರ್ಗವಾಗಿದ್ದು ಅದಕ್ಕಾಗಿಯೇ ಅತೀ ದೀರ್ಘ ಹಗಲನ್ನು ಹೊಂದಿರುವ ಜೂನ್ ೨೧ ನೇ ತಾರೀಖಿನಂದೇ ವಿಶ್ವ ಯೋಗ ದಿನವಾಗಿ ಆಚರಿಸಲಾಗುವುದು ಎಂದರು.

ಈ ದಿನಾಚರಣೆ ಪ್ರಯುಕ್ತ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಪ್ರಶಿಕ್ಷಣಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಯೋಗದ ವಿವಿಧ ಆಸನಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ವರ್ಗದವರೆಲ್ಲರೂ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಓಂ ಕಾರದೊಂದಿಗೆ ಆರಂಭವಾದ ಯೋಗ ಪ್ರದರ್ಶನ ಕಾರ್ಯಕ್ರಮ ಶಾಂತಿ ಮಂತ್ರ ಪಠಿಸುವುದರ ಮೂಲಕ ಹಾಗೂ ಧ್ಯಾನ ದೊಂದಿಗೆ ಅಂತ್ಯಗೊಂಡಿತು.