ಮೈತ್ರಿ ಬಿ.ಇಡಿ ಕಾಲೇಜಿಗೆ 100% ಫಲಿತಾಂಶ
ಕುವೆಂಪು ವಿಶ್ವ ವಿದ್ಯಾನಿಲಯದ 2014-15 ನೇ ಸಾಲಿನ ಬಿ.ಇಡಿ ಫಲಿತಾಂಶ ಪ್ರಕಟವಾಗಿದ್ದು ಮೈತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 100% ಫಲಿತಾಂಶ ಲಭಿಸಿದೆ. ಪರೀಕ್ಷೆ ತೆಗೆದುಕೊಂಡ ಒಟ್ಟು 95 ವಿದ್ಯಾರ್ಥಿಗಳಲ್ಲಿ 85 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (Distinction), 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ (First Class) ಉತ್ತೀರ್ಣರಾಗಿರುತ್ತಾರೆ. ಕುಮಾರಿ ಉಮುಲ್ ಖೈರ್ ಎಂಬ ವಿದ್ಯಾರ್ಥಿನಿಯು ಶೇ. 86.79 ರಷ್ಟು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇನ್ನುಳಿದಂತೆ ಕು. ಅಮೃತಾ. ಎನ್.ಆರ್ (85.43) ಹಾಗೂ ಮಂಜುಶ್ರೀ. ವಿ.ಎಸ್ (85.36) ಅಂಕ ಗಳಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿರುತ್ತಾರೆ.
ಕಾಲೇಜು ಈ ರೀತಿ ಸತತ 7 ವರ್ಷಗಳಿಂದ ಪಡೆಯುತ್ತಿರುವ ಶೇ. 100% ಫಲಿತಾಂಶಕ್ಕೆ ಆಡಳಿತ ಮಂಡಳಿ ಕಾಲೇಜಿನ ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.

08182 240106
mythrieducationgroup@gmail.com 


