News and Events
Children’s Day Celebration – 2015
Date : 26-11-2015
Childerns Day Celebration at Kumadvathi High School, Shikaripuraon On Nov, 14 2015
ಕನ್ನಡ ರಾಜ್ಯೋತ್ಸವ ಆಚರಣೆ
Date : 06-11-2015
ನವೆಂಬರ್ 01, 2015 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಕಳಸಾ-ಬಂಡೂರಿ ಸ್ಥಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು.
ವಾಲ್ಮೀಕಿ ಜಯಂತಿ ಆಚರಣೆ
Date : 28-10-2015
ದಿನಾಂಕ 27-10-2015 ರಂದು ಕುಮದ್ವತಿ ಪ್ರೌಢಶಾಲೆಯಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Gandhi Jayanthi Celebration
Date : 03-10-2015
ದಿನಾಂಕ 02-10-2015 ರಂದು ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಶ್ರಮಾಧಾನ, ಪ್ರಬಂಧ ರಚನೆ, ಭಾಷಣ, ಗಾಂಧೀಜಿ ಭಾವಚಿತ್ರ ರಚನೆಗಳನ್ನು, ಭಾವಚಿತ್ರ ಸಂಗ್ರಹ, ದೇಶಭಕ್ತಿಗೀತೆ, ನುಡಿಮುತ್ತು ಸಂಗ್ರಹ, ಸಾಮಾಜಿಕ ಉತ್ಪಾದನ ಕಾರ್ಯ ಯೋಜನೆ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಮೈತ್ರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಶ್ರೀಯುತ ಗಿರೀಶ್‌ರವರು ಉಪನ್ಯಾಸ ಮಾತುಗಳನ್ನಾಡಿದರು. ಮಹಾನ್ ಚೇತನಗಳಾದಂತಹ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ತತ್ವಗಳು, ಆದರ್ಶತೆ, ಸರಳತೆ ಅವರ ದೇಶ ಸೇವೆಯ ಕೊಡುಗೆಗಳ ಬಗ್ಗೆ ಸವಿ ವಿವರವಾಗಿ ತಿಳಿಸಿದರು. ವಿಶ್ವಸಂಸ್ಥೆಯು ಅಹಿಂಸಾ ದಿನವನ್ನಾಗಿ […]
ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟ
Date : 21-09-2015
ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟವು ಭದ್ರಾವತಿಯ ಕನಕ ಮಂಟಪದ ಕ್ರೀಡಾಂಗಣದಲ್ಲಿ ದಿನಾಂಕ: 22/೦8/2015 ಶನಿವಾರದಂದು ನಡೆಯಿತು. ಶಿವಮೊಗ್ಗ ಜಿಲ್ಲೆ ಮಟ್ಟದ ವಿದ್ಯಾಭಾರತಿಯ ಒಟ್ಟು 18 ಪ್ರೌಢಶಾಲೆಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಅದರಲ್ಲಿ ಕುಮದ್ವತಿ ಪ್ರೌಢಶಾಲೆಯು ಅತ್ಯುತ್ತಮ ಕ್ರೀಡಾ ಪ್ರದರ್ಶನ ತೋರಿ 17 ಪ್ರಥಮ, 12 ದ್ವಿತೀಯ, 12 ತೃತೀಯ ಬಹುಮಾನಗಳನ್ನುಗಳಿಸಿದೆ. ಬಾಲಕಿಯರ ವಿಭಾಗದಲ್ಲಿ ಕು| ಭೂಮಿಕಾ, ಸುಚಿತ್ರ, ಮಾನಸ, ಚಂದನ, ಪ್ರಿಯಾಂಕ, ಸುಪ್ರಿಯಾ, ಶರಣ್ಯ ಹಾಗೂ ಬಾಲಕರ ವಿಭಾಗದಲ್ಲಿ ಅರುಣ.ಎಸ್.ಎ, ಶಶಾಂಕ.ಬಿ.ಜೆ, ಪುನೀತ್, ಪವನ, ಸೂರಜ್, ರಾಕೇಶ್ […]
ಜಿಲ್ಲಾ ಜ್ಞಾನ ವಿಜ್ಞಾನ ಮೇಳ
Date : 21-09-2015
ವಿದ್ಯಾ ಭಾರತಿ ಕರ್ನಾಟಕ ಶಿವಮೊಗ್ಗ ಜಿಲ್ಲೆ ಜಿಲ್ಲಾ ಜ್ಞಾನ ವಿಜ್ಞಾನ ಮೇಳ, ದಿನಾಂಕ: 30-೦8-2015 ಮತ್ತು 31-08-2015 ರಂದು ನಡೆದ ಜಿಲ್ಲಾ ಜ್ಞಾನ ವಿಜ್ಞಾನ ಮೇಳವು ಸೇವಾ ಸಾಗರ ಪ್ರಾಥಮಿಕ ಶಾಲೆ ಸಾಗರದಲ್ಲಿ ನಡೆದಿದ್ದು, ನಮ್ಮ ಶಾಲೆಯ ಮಕ್ಕಳು ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಇವರಿಗೆ ನಮ್ಮ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವೃಂದ ಅಭಿನಂದನೆಗಳನ್ನು ತಿಳಿಸಿರುತ್ತದೆ.
ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ
Date : 21-09-2015
ದಿನಾಂಕ: 17/೦7/2015 ರಂದು ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ತಾಲ್ಲೂಕಿನ ಶಾಸಕರಾದ ಶ್ರೀಯುತ. ಬಿ.ವೈ.ರಾಘವೇಂದ್ರ ರವರು ಉದ್ಘಾಟಿಸಿದರು. ಸಂಘವು ಶಕ್ತಿಯ ಕ್ರಿಯಾಶೀಲತೆಯ ಸಂಕೇತವಾಗಿದ್ದು ಸಂಘದ ಮುಖಾಂತರ ನಮ್ಮ ಭವಿಷ್ಯವನ್ನು ನಾವೆ ರೂಪಿಸಿಕೊಳ್ಳಬೇಕಾಗುತ್ತದೆ. ಗೆಲುವು ಸಾದಕನ ಸೊತ್ತೆ ಹೊರತು ಸೋಮಾರಿ ಸೊತ್ತಲ್ಲ. ಅತೀ ಚಿಕ್ಕ ವಯಸ್ಸಿನಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ಕ್ರಿಕೆಟ್ ಆಟಗಾರನಾದ ಸಚಿನ್ ತೆಂಡೂಲ್ಕ್‌ರ್‌ನ ಸಾಧನೆ ಜಗತ್ತೆ ಮೆಚ್ಚುವಂತ್ತಾಗಿದೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಜೊತೆಗೆ ಸಾಧನೆ ಕಡೆಗೆ ಹೆಚ್ಚಿನ ಗಮನ ಕೊಡಬೇಕು. […]
ರಕ್ಷಾ ಬಂಧನ ಕಾರ್ಯಕ್ರಮ
Date : 21-09-2015
ರಕ್ಷಾ ಬಂಧನ ಕಾರ್ಯಕ್ರಮವನ್ನು ದಿನಾಂಕ: 29/08/2015 ಶನಿವಾರ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಕೃಷ್ಣಪ್ರಸಾದ.ಬಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಮುಖರು, ಇವರು ತಮ್ಮ ಬೌದ್ಧಿಕನಲ್ಲಿ ಪುರಾತನ ಕಾಲದಿಂದಲೂ ರಕ್ಷಾ ಬಂಧನ ಕಾರ್ಯಕ್ರಮವು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ದೇಶದ ರಕ್ಷಣೆಯ ಒಗ್ಗಟ್ಟಿಗೆ ಪೂರಕವಾಗಿದೆ. ವಿಶ್ವಕ್ಕೆ ಸಂಸ್ಕೃತಿಯನ್ನು ಹಾಗೂ ಸಂಸ್ಕಾರವನ್ನು ಪ್ರಪ್ರಥಮವಾಗಿ ಪರಿಚಯಿಸಿದಂತಹ ರಾಷ್ಟ್ರ ಭಾರತವಾಗಿದ್ದು, ಭಾರತದ ಸಂಸ್ಕೃತಿಯನ್ನು ಇತರೆ ರಾಷ್ಟ್ರಗಳು ಪಾಲಿಸುತ್ತಿದ್ದು, ಉಡುಗೆ, ಸಂಸ್ಕಾರ ಮತ್ತು ಭಾಷೆಯ ಮಹತ್ವವು ಇಡಿ ಜಗತ್ತು […]
ಸ್ವಚ್ಛ ಭಾರತ ಅಭಿಯಾನ ರಸಪ್ರಶ್ನೆಯಲ್ಲಿ ಕುಮಾರಿ ಶರಣ್ಯ ಪ್ರಥಮ
Date : 21-09-2015
ಶಿಕಾರಿಪುರ ಪಟ್ಟಣದ ಪುರಸಭೆಯಲ್ಲಿ ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ರಸಪ್ರಶ್ನೆ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪಟ್ಟಣದ ಕುಮದ್ವತಿ ಪ್ರೌಢ ಶಾಲೆಯ ಕು|| ಶರಣ್ಯ (9ನೇ ತರಗತಿ,ಆ.ಮಾ) ಪ್ರಥಮ ಸ್ಥಾನ ಪಡೆದಿದ್ದಾಳೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕ ಆಡಳಿತ ಮತ್ತು ಸ್ಥಳಿಯ ಸಂಸ್ಥೆಗಳ ಆಶ್ರಯದಲ್ಲಿ ನಡೆದ 69ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಾಲ್ಲೂಕಿನ ಶಾಸಕರಾದ ಶ್ರೀಯುತ.ಬಿ.ವೈ ರಾಘವೇಂದ್ರರವರು ವಿಜೇತ ವಿದ್ಯಾರ್ಥಿನಿಗೆ ಚೆಕ್ ಮತ್ತು ಟ್ರೋಫಿಯನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ನಗರದ ಮಹಾದೇವಪ್ಪ ತಹಶೀಲ್ದಾರ್ […]

08187-224378/222188
khsmythri@gmail.com 

