Kumadvathi High School,  Shikaripura

Kumadvathi High School

Shikaripura
  08187-224378/222188
  khsmythri@gmail.com
Kumadvathi High School > News and Events > ರಕ್ಷಾ ಬಂಧನ ಕಾರ್ಯಕ್ರಮ

ರಕ್ಷಾ ಬಂಧನ ಕಾರ್ಯಕ್ರಮ

Raksha Bandana Raksha Bandana1

ರಕ್ಷಾ ಬಂಧನ ಕಾರ್ಯಕ್ರಮವನ್ನು ದಿನಾಂಕ: 29/08/2015 ಶನಿವಾರ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ಕೃಷ್ಣಪ್ರಸಾದ.ಬಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಮುಖರು, ಇವರು ತಮ್ಮ ಬೌದ್ಧಿಕನಲ್ಲಿ ಪುರಾತನ ಕಾಲದಿಂದಲೂ ರಕ್ಷಾ ಬಂಧನ ಕಾರ್ಯಕ್ರಮವು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ದೇಶದ ರಕ್ಷಣೆಯ ಒಗ್ಗಟ್ಟಿಗೆ ಪೂರಕವಾಗಿದೆ.
ವಿಶ್ವಕ್ಕೆ ಸಂಸ್ಕೃತಿಯನ್ನು ಹಾಗೂ ಸಂಸ್ಕಾರವನ್ನು ಪ್ರಪ್ರಥಮವಾಗಿ ಪರಿಚಯಿಸಿದಂತಹ ರಾಷ್ಟ್ರ ಭಾರತವಾಗಿದ್ದು, ಭಾರತದ ಸಂಸ್ಕೃತಿಯನ್ನು ಇತರೆ ರಾಷ್ಟ್ರಗಳು ಪಾಲಿಸುತ್ತಿದ್ದು, ಉಡುಗೆ, ಸಂಸ್ಕಾರ ಮತ್ತು ಭಾಷೆಯ ಮಹತ್ವವು  ಇಡಿ ಜಗತ್ತು ತಲೆಯೆತ್ತಿ ನೋಡುತ್ತಿರುವ ರಾಷ್ಟ್ರ ಭಾರತವಾಗಿದೆ ಎಂದು ಶ್ರೀಯುತ ಕೃಷ್ಣಪ್ರಸಾದ.ಬಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಮುಖರು. ತಮ್ಮ ಬೌದ್ಧಿಕ ನುಡಿಗಳನ್ನಾಡಿದರು.
ನಮ್ಮ ಭಾಷೆಯಲ್ಲಿನ ಪಾಂಡಿತ್ಯ ಹಾಗೂ ಪ್ರತಿಯೊಬ್ಬ ಶ್ರೇಷ್ಠ ವ್ಯಕ್ತಿಯ ಮಾತೃ ಭಾಷೆಯು ಬೇರೆಯಾಗಿದ್ದರು, ಅವರಲ್ಲಿನ ಭಾಷಾಭಿಮಾನವು ಅವರ ಪ್ರಸಿದ್ಧಿಗೆ ಮುಖ್ಯಕಾರಣವಾಗಿದೆ. ರಕ್ಷಾ ಬಂಧನವು ಸಹೋದರತೆಯ ಭಾವನೆಯನ್ನು ಹೊಂದಿದ್ದು ನಮ್ಮ ರಕ್ಷಣೆಯ ಜೊತೆಗೆ ದೇಶದ ರಕ್ಷಣೆಗೆ ಬೇಕಾದ ಮಹತ್ವವನ್ನು ತಿಳಿಸುತ್ತದೆ ಎಂದು ತಮ್ಮ ಬೌದ್ಧಿಕನಲ್ಲಿ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ತೇಜಸ್ವಿನಿ ರಾಘವೇಂದ್ರ.ಇವರು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಹಿರಿಯರಿಗೆ ಗೌರವ ಕೊಡುವ ಗುಣವನ್ನು ಅಳವಡಿಸಿಕೊಂಡು ಮಾದರಿಯಾಗಬೇಕು ಹಾಗೂ ಈ ದಿನ ಆಚರಿಸುವ ರಕ್ಷಾ ಬಂಧನವು ದೇಶದ ರಕ್ಷಣೆಗೆ ಪೂರಕವಾಗಿರಬೇಕು. ೨೧ನೇ ಶತಮಾನವು ಭಾರತೀಯರ ಶತಮಾನವಾಗಿ ಇಡಿ ವಿಶ್ವಕ್ಕೆ ಮಾದರಿಯಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಬೇಕು. ಸ್ವಾಮಿ ವಿವೇಕಾನಂದರು ದೇಶಕ್ಕೆ ಶಕ್ತಿಕೊಟ್ಟವರು ಅವರು ಹಾಕಿಕೊಟ್ಟ ಅಡಿಪಾಯದಲ್ಲಿ ಪ್ರಧಾನಿಗಳಾದ ನರೇಂದ್ರಮೋದಿಯವರ ಜನಪ್ರಿಯ ಯೋಜನೆಗಳು ಹಾಗೂ ಅವರ  ಕರೆಯಂತೆ ರಕ್ಷಾಬಂಧನ ಕಾರ್ಯಕ್ರಮವು ಸುರಕ್ಷಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಾದ ಶ್ರೀಯುತ ವಿಶ್ವನಾಥ.ಪಿ, ಮುಖ್ಯೋಪಾಧ್ಯಾಯರು ಮಾತನಾಡಿ ಅಣ್ಣ ತಂಗಿಯ ನಡುವೆ ಇರುವ ಅನನ್ಯ ಸಂಬಂಧವನ್ನು ಒಂದು ಮಕ್ಕಳ ಹಾಡನ್ನು ಹಾಡುವುದರ ಮೂಲಕ ರಕ್ಷಾ ಬಂಧನ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಶ್ರೀಯುತ ನಾರಾಯಣ ಜಿ, ಶ್ರೀಯುತ ಮಂಜುನಾಥ, ಹಾಗೂ ಶ್ರೀಯುತ ಪ್ರದೀಪ ಉಪಸ್ಥಿತರಿದ್ದರು.
ಹಾಗೂ ಮೈತ್ರಿ ಕುಮದ್ವತಿ ಶಾಲೆಯ ಎಲ್ಲಾ ಸಿಬ್ಬಂಧಿ ವರ್ಗದವರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ಕು| ಚಂದನ ಮತ್ತು ಸಂಗಡಿಗರು, ಸ್ವಾಗತ ಕು| ಆಕಾಶ.ಎಸ್.ಎಂ, ವಂದನಾರ್ಪಣೆಯನ್ನು ಪವಿತ್ರ.ವಿ ಹಾಗೂ ಕಾರ್ಯಕ್ರಮದ ನಿರೂಪಣೆ ಅನ್ವಿತಾ.ಜಿ ನಡೆಸಿದರು.